ಶಾನ್ ಮೀಡಿಯಾ ನ್ಯೂಸ್: ಬಹುತೇಕ ಎಲ್ಲ ಎಕ್ಸಿಟ್ ಪೋಲ್ ಗಳು ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರೆ ಡಿಬಿ ಲೈಬ್ ಸಮೀಕ್ಷೆ ಮಾತ್ರ ಎನ್.ಡಿ.ಎ ಮೈತ್ರಿಕೂಟಕ್ಕೆ ಢವಢವ ಸೃಷ್ಟಿಸಿದೆ.
ಡಿ.ಬಿ ಲೈವ್ ಸಮೀಕ್ಷೆಯ ಪ್ರಕಾರ, NDA 543 ಸ್ಥಾನಗಳಲ್ಲಿ 215-245 ಸ್ಥಾನಗಳಿಸಿದೆ ಇಂಡಿಯಾ ಮೈತ್ರಿಕೂಟ 260-290 ಸ್ಥಾನ ಪಡೆಯಲಿದೆ ಎಂದಿದೆ. ಇತರರು 28-48 ಸ್ಥಾನ ಪಡೆದುಕೊಳ್ಳಲಿದೆಯೆಂದುತನ್ನ ಸಮೀಕ್ಷೆಯ ಫಲಿತಾಂಶ ಉಲ್ಲೇಖಿಸಿದೆ.
ಬಿಹಾರದಲ್ಲಿ NDA ಮೈತ್ರಿಕೂಟ 14-16 ಸ್ಥಾನಕ್ಕೆಮುಗ್ಗರಿಸಲಿದೆ. ಇಂಡಿಯಾ ಮೈತ್ರಿಕೂಟ 24-26 ಸ್ಥಾನ ಗೆಲ್ಲಲಿದೆಯೆಂದು ಸಮೀಕ್ಷೆ ಬೆಳಕು ಚೆಲ್ಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ 18-20 ಸ್ಥಾನ ಗೆದ್ದರೆ ಬಿಜೆಪಿ, ಜೆಡಿಎಸ್ ಮೈತ್ರಿಕೂಟ8-10 ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದೆ.
ಸಂಪೂರ್ಣ ವೀಡಿಯೋ ವೀಕ್ಷಿಸಿ:
