ಕಾಗದ ಪತ್ರ, ವಿದೇಶಿ ವಿನಿಮಯ ಹಂಚಿಕೆ ವ್ಯವಸ್ಥೆ, ವಿಮಾನ ನಿಲ್ದಾಣಕ್ಕೆ ತಲುಪಿಸುವುದು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಸಂಬಂಧ ಪಟ್ಟ ಇಲಾಖೆಗಳ ಸಹಕಾರದೊಂದಿಗೆಒದಗಿಸಲಾಗುತ್ತದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹೇಳಿದ್ದಾರೆ.
ಜನಸಂಖ್ಯೆ ಆಧಾರದ ಮೇಲೆ ಎಷ್ಟುಯಾತ್ರಿಕರನ್ನು ಹಜ್ ಯಾತ್ರೆಗೆ ಕಳುಹಿಸ ಬೇಕು ಎಂಬುದನ್ನು ಮುಂಬೈ ನಲ್ಲಿರುವ ಹಜ್ ಸಮಿತಿ ನಿರ್ಧರಿಸುತ್ತದೆ. ಈ ಸಮಿತಿಯೊಂದಿಗೆ ರಾಜ್ಯ ಹಜ್ ಸಮಿತಿ ಸಂಯೋಜನೆ ಮಾಡುತ್ತದೆ. ಅರೇಬಿಯಾದಲ್ಲಿ ಕರ್ನಾಟಕದಿಂದ ತೆರಳುವ ಯಾತ್ರಿಕರ ಯೋಗಕ್ಷೇಮಕ್ಕೆ ಸ್ವಯಂ ಸೇವಕರನ್ನು ನಿಯೋಜಿಸಲಾಗುತ್ತದೆ.
ಆದರೆ ಈ ಬಾರಿ ಕೇವಲ 32 ಸ್ವಯಂ ಸೇವಕರನ್ನು ಮಾತ್ರ ನಿಯೋಜನೆ ಮಾಡಲಾಗಿರುವುದರಿಂದ ಹಜ್ ಯಾತ್ರಿಗಳಿಗೆ ತುಂಬಾ ತೊಂದರೆ ಆಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ ಈ ಬಗ್ಗೆ ಹಜ್ ಸಮಿತಿ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಆಗ್ರಹಿಸುತ್ತೇನೆ. ಅಲ್ಲದೆ ಬೆಂಗಳೂರಿನ ಹಜ್ ಭವನದಲ್ಲಿ ಯಾತ್ರೆಗೆ ಹೊರಡುವ ಯಾತ್ರಿಗಳಿಗೆ ಸರಿಯಾದ ಲಾಡ್ಜಿಂಗ್ ವ್ಯವಸ್ಥೆ ಕೂಡ ಇಲ್ಲ ಎಂಬ ಕೂಗು ಕೇಳಿ ಬರುತ್ತಿದೆ.
ಕರ್ನಾಟಕದಿಂದ ಹಜ್ ಯಾತ್ರೆಗೆ ಹೊರಡುವ ಕೊನೆಯ ತಂಡ 24 ಮತ್ತು 25 ತಾರೀಕು ಆಗಿರುವುದರಿಂದ ಅಂದು ಸುಮಾರು 1 ಸಾವಿರಕ್ಕೂ ಅಧಿಕ ಮಂದಿ ಪವಿತ್ರ ಹಜ್ ಯಾತ್ರೆಗೆ ಹೊರಟಿದ್ದು ಈ ಬಗ್ಗೆ ಸಹ ಸಂಭಂದಪಟ್ಟವವರು ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕೆಂದು ಆಗ್ರಹಿಸುತ್ತೇನೆ.
ಅಫ್ಸರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ