BREAKING: ಸಿಪಿಐಗೆ ಚಾಕುವಿನಿಂದ ಇರಿದ ರೌಡಿಶೀಟರ್ ಮೇಲೆ ಫೈರಿಂಗ್

ಬೀದರ್ ನಗರದಲ್ಲಿ ರೌಡಿಶೀಟರ್ ರಸೂಲ್ ಮೇಲೆ ಫೈರಿಂಗ್ ಮಾಡಲಾಗಿದೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಪೊಲೀಸರ ಮೇಲೆಯೇಗೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಫೈರಿಂಗ್ ಮಾಡಲಾಗಿದೆ.

ಬೀದರ್ ನ್ಯೂಟೌನ್ ಠಾಣೆ ಸಿಪಿಐ ಸಂತೋಷ್ ಅವರ ಮೇಲೆ ರಸೂಲ್ ಚಾಕುವಿನಿಂದ ದಾಳಿ ಮಾಡಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಸಿಪಿಐ ಸಂತೋಷ್ ಫೈರಿಂಗ್ ಮಾಡಿದ್ದಾರೆ.

ಬೀದರ್ ನಗರದ ಸಾಯಿ ಸ್ಕೂಲ್ ಆವರಣದ ಬಳಿ ರಾತ್ರಿ ಘಟನೆ ನಡೆದಿದೆ.

ತಪ್ಪಿಸಿಕೊಳ್ಳಲು ಯತ್ನಿಸಿದ ರಸೂಲ್ ಬಲಗಾಲಿಗೆ ಫೈರಿಂಗ್ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಗಾಯಾಳು ಸಿಪಿಐ ಸಂತೋಷ್ ಅವರನ್ನು ಬ್ರಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ನವೀನ ಹಳೆಯದು
WhatsApp Join our 'Shan Media News' WhatsApp group - Join Now ×