ನಮಾಝ್ ಬಳಿಕ ಈಜಲು ಹೋಗಿ‌ದ್ದ ಮೂವರು ಬಾಲಕರು ಸಾವು

 




ರಾಮನಗರ: ನಮಾಝ್ ಬಳಿಕ ಈಜಲು ಹೋಗಿ‌ದ್ದ ಮೂವರು ಬಾಲಕರು ಪ್ರಾಣ ಕಳಕೊಂಡ ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ಘಟನೆ ನಡೆದಿದೆ.




ಶಾಬಾಝ್ (14), ಸುಲ್ತಾನ್ (13), ರಿಹಾನ್ ಖಾನ್ (16) ಮೃತಪಟ್ಟವರು. ಶಾಬಾಝ್ ಹಾಗೂ ರಿಯಾನ್ ಖಾನ್ ಸಹೋದರರಾಗಿದ್ದು, ಮೃತರೆಲ್ಲರೂ ರಾಮನಗರ ಟೌನ್‌ನ ಸುಲ್ತಾನ್ ನಗರದವರು.

ಒಟ್ಟು 8 ಯುವಕರ ತಂಡ ನಮಾಜ್ ಮುಗಿಸಿದ ಈಜಲು ಹೊಂಡಕ್ಕೆ ಇಳಿದಿದ್ದರು. ಈ ವೇಳೆ ಮೂವರು ನೀರುಪಾಲಾದರೆ, ಐವರು ಸಾವಿನ ದವಡೆಯಿಂದ ಬಚಾವ್‌ ಆಗಿದ್ದಾರೆ.

ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.


ನವೀನ ಹಳೆಯದು
WhatsApp Join our 'Shan Media News' WhatsApp group - Join Now ×