ವಿಟ್ಲ:- ರಸ್ತೆಯಲ್ಲಿ ನಮಾಝ್ ಮಾಡಿದ ವಿಚಾರವಾಗಿ ಸುಮೊಟೊ ಕೇಸ್ ದಾಖಲಿಸಿದ ಕ್ರಮವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಅವರು ಖಂಡಿಸಿದ್ದಾರೆ.
ಒಂದು ಮಸೀದಿಗೆ ತಾಗಿಕೊಂಡ ರಸ್ತೆಯಲ್ಲಿ ಕೇವಲ ಎರಡು ಮೂರು ನಿಮಿಷಗಳ ಕಾಲ ಶುಕ್ರವಾರ ದಿವಸ ಮಸೀದಿ ತುಂಬಿ ಇದ್ದ ಕಾರಣ ರಸ್ತೆಯಲ್ಲಿ ನಮಾಝ್ ಮಾಡಿದಕ್ಕೆ ಸುಮೊಟೊ ಕೇಸು ದಾಖಲಿಸುವ ಅಗತ್ಯ ಇರಲಿಲ್ಲ ಅಂತಹದ್ದು ಏನಾದರೂ ತೊಂದರೆ ಇದ್ರೆ ಎಚ್ಚರಿಕೆ ಕೊಟ್ಟು ಬಿಡಬಹುದಿತ್ತು
ಈ ಘಟನೆಯ ಬಗ್ಗೆ ಸುಮೊಟೊ ಕೇಸ್ ಮಾಡುವ ಅಗತ್ಯವೇ ಇರಲಿಲ್ಲ ಮತ್ತು ಸುಮೊಟೊ ಕೇಸ್ ಮಾಡಿರುವುದನ್ನು ಖಂಡಿಸುತ್ತೇನೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
