ಬಾಬಾ ರಾಮದೇವ್‌ಗೆ ಮತ್ತೊಮ್ಮೆ ಚಾಟಿ ಬೀಸಿದ ಸುಪ್ರೀಂಕೋರ್ಟ್‌

 


ನವದೆಹಲಿ: ದಾರಿ ತಪ್ಪಿಸುವ ಜಾಹೀರಾತು ನೀಡುತ್ತಿರುವುದಕ್ಕಾಗಿ ಯೋಗಗುರು ಬಾಬಾ ರಾಮದೇವ್‌ ವಿರುದ್ಧ ತೀಕ್ಷ್ಣ ಟೀಕೆಗಳನ್ನು ಮಾಡುತ್ತಲೇ ಬಂದಿರುವ ಸುಪ್ರೀಂಕೋರ್ಟ್‌ ಮತ್ತೊಮ್ಮೆ ಚಾಟಿ ಬೀಸಿದೆ.

ರಾಮದೇವ್‌ ಅವರಿಗೆ ಒಳ್ಳೆಯ ಪ್ರಭಾವವಿದೆ. ಆದರೆ ಅವರು ಅದನ್ನು ಸರಿಯಾಗಿ ಬಳಸಬೇಕು, ಜನರಿಗೆ ವಂಚನೆ ಮಾಡಲಿಕ್ಕಲ್ಲ ಎಂದು ಹೇಳಿದೆ

ರಾಮದೇವ್‌ ಅವರು ಯೋಗ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ನ್ಯಾಯಾಲಯದ ಗಮನಕ್ಕೆ ತಂದಾಗ, ‘ಯೋಗ ಕ್ಷೇತ್ರಕ್ಕಾಗಿ ಅವರು ಏನೇನು ಮಾಡಿದ್ದಾರೋ ಅದು ಒಳ್ಳೆಯದೆ. ಆದರೆ ಪತಂಜಲಿ ಉತ್ಪನ್ನಗಳಿಗೆ ಸಂಬಂಧಿಸಿದ ವಿಷಯವೇ ಬೇರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಬಾಬಾ ರಾಮದೇವ್‌, ಅವರ ಪತಂಜಲಿ ಕಂಪನಿ ಹಾಗೂ ಆ ಕಂಪನಿಯ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಪೂರ್ಣಗೊಳಿಸಿದ್ದು, ತೀರ್ಪನ್ನು ಕಾದಿರಿಸಿದೆ.

ಇದೇ ವೇಳೆ, ಪತಂಜಲಿ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದ ಸಂದರ್ಶನದ ವೇಳೆ ನ್ಯಾಯಾಲಯದ ಬಗ್ಗೆ ಪ್ರತಿಕೂಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಭಾರತೀಯ ವೈದ್ಯ ಸಂಘ (ಐಎಂಎ)ದ ಅಧ್ಯಕ್ಷ ಆರ್‌.ವಿ. ಅಶೋಕನ್‌ ಅವರು ಸುಪ್ರೀಂಕೋರ್ಟ್‌ನ ಬೇಷರತ್‌ ಕ್ಷಮೆ ಕೇಳಿದರು. ಸುಖಾಸನದ ಮೇಲೆ ಕುಳಿತು ಸಂದರ್ಶನ ನೀಡುತ್ತಾ, ಕೋರ್ಟ್‌ ಬಗ್ಗೆ ವ್ಯಂಗ್ಯ ಮಾಡಬೇಡಿ ಎಂದು ತಾಕೀತು ಮಾಡಿದ ನ್ಯಾಯಪೀಠ ಐಎಂಎ ಅಧ್ಯಕ್ಷ ಕ್ಷಮಾಪಣೆ ಅಫಿಡವಿಟ್‌ ಅನ್ನು ಸ್ವೀಕರಿಸಲು ನ್ಯಾಯಾಲಯ ನಿರಾಕರಿಸಿತು


ನವೀನ ಹಳೆಯದು
WhatsApp Join our 'Shan Media News' WhatsApp group - Join Now ×