ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿನ ರಸ್ತೆ ನಮಾಝ್ ವಿಷಯದಲ್ಲಿ ಕೆ.ಎಸ್.ಈಶ್ವರಪ್ಪನವರು ನಮಾಝ್ ನಿರ್ವಹಿಸಿದ ವ್ಯಕ್ತಿಗಳನ್ನು ಉದ್ದೇಶಿಸಿ ದೇಶದ್ರೋಹಿಗಳು ಎಂದು, ಅದೇ ರೀತಿಯಲ್ಲಿ ಸರಕಾರವನ್ನು , ಸಿದ್ದರಾಮಯ್ಯ,ಹಾಗು ಟಿಪ್ಪು ಸುಲ್ತಾನ್ ಎಂಬಿತ್ಯಾದಿಯಾಗಿ ಪ್ರಚೋದಿತ ಹೇಳಿಕೆ ನೀಡಿದ್ದಾರೆ. ತಾನು ಬಿಜೆಪಿ ಪಕ್ಷದಲ್ಲಿರುವಾಗ ಮುಸ್ಲಿಮ್ ಸಮುದಾಯವನ್ನು ಗುರಿಮಾಡಿ ದ್ವೇಷ ಭಾಷಣ ಮಾಡಿ ಪಕ್ಷದಲ್ಲಿ ತನ್ನ ಅರ್ಹತೆಯನ್ನು ಅಧಿಕಗೊಳಿಸಲು ಪ್ರಯತ್ನಿಸಿ ಹಾಲಿ ಮೂಲೆ ಗುಂಪು ಆಗಿದ್ದಾರೆ. ತಾನು ಓರ್ವ ವಿಲೇವಾರಿತ ರಾಜಕೀಯ ತ್ಯಾಜ್ಯ ಎಂದು ಗೊತ್ತಿದ್ದರೂ ಈಶ್ವರಪ್ಪ ತನ್ನ ಉಳಿಕೆ ಜೀವನವನ್ನು ಅದೇ ಚಾಳಿ ಮುಂದುವರಿಸಿ ಕೊಂಡು ಹೋಗಲು ನಿರ್ಧರಿಸಿದರೆ ಅದಕ್ಕೆ ಜನರು ಏನು ಮಾಡಲು ಸಾಧ್ಯ ಇಲ್ಲ. ರಸ್ತೆ ನಮಾಝ್ ನ ವಾಸ್ತವ ಏನು ಎಂದು ಅರಿಯದ ಖುದ್ದು ಈಶ್ವರಪ್ಪ ನವರೇ ಪಕ್ಷದ ತ್ಯಾಜ್ಯ ವಸ್ತುವಾಗಿ ನಡು ರಸ್ತೆಯಲ್ಲಿ ಬಿದ್ದಿರುವುದೇ ಹಾಲಿ ಸಾರ್ವಜನಿಕರಿಗೆ ಇರುವ ತೊಂದರೆ. ಈಶ್ವರಪ್ಪರಂತಹ ವಿಲೇವಾರಿತ ಕೋಮು ತ್ಯಾಜ್ಯವನ್ನು ಜನರು ಮರು ವಿಲೇವಾರಿ ಮಾಡಬೇಕಿದೆ.
ಈಶ್ವರಪ್ಪನವರು ಅರಿಯಲಿ.
ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು. ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.