ಕಾಂಗ್ರೆಸ್ ತಪ್ಪುಗಳನ್ನು ಮಾಡಿದೆ, ರಾಜಕಾರಣವನ್ನು ಬದಲಿಸಿಕೊಳ್ಳಬೇಕಿದೆ: ರಾಹುಲ್ ಗಾಂಧಿ



ಲಕ್ನೋ: ಕಾಂಗ್ರೆಸ್ ಪಕ್ಷವೂ ತಪ್ಪುಗಳನ್ನು ಮಾಡಿದೆ ಮತ್ತು ಭವಿಷ್ಯದಲ್ಲಿ ಕಾಂಗ್ರೆಸ್ ರಾಜಕಾರಣವನ್ನು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರ.

ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಒಬ್ಬ ರಾಜನ ತರಹ ಆಡುತ್ತಿದ್ದಾರೆಯೇ ಹೊರತು ಪ್ರಧಾನಿಯಂತಲ್ಲ. ಅವರು ಇಬ್ಬರು-ಮೂವರು ಉದ್ಯಮಿಗಳ ಮುಂದಾಳು ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ತನ್ನ ರಾಜಕಾರಣವನ್ನು ಬದಲಿಸಿಕೊಳ್ಳಬೇಕಿದೆ. ಅದು ಆಗಲೇಬೇಕು. ಕಾಂಗ್ರೆಸ್​ ಕೂಡ ತಪ್ಪುಗಳನ್ನು ಮಾಡಿದೆ ಎಂದು ನಾನು ಪಕ್ಷ ಸೇರಿದಾಗಿನಿಂದಲೂ ಹೇಳುತ್ತಿದ್ದೇನೆ ಎಂದು ಇದೇ ಸಂದರ್ಭದಲ್ಲಿ ರಾಹುಲ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚೆಗೆ ನಾನು ಸಿದ್ಧವಾಗಿದ್ದೇನೆ ಎಂದು ರಾಹುಲ್ ಆದರೆ ಅದಕ್ಕೆ ಪ್ರಧಾನಿ ಮೋದಿ ಸಿದ್ಧರಿಲ್ಲ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ರಾಜಕೀಯವನ್ನು ಬದಲಾಯಿಸಬೇಕಾಗಿದೆ ಎಂದು‌ ಪ್ರತಿಪಾದಿಸಿದರು.



ನವೀನ ಹಳೆಯದು
WhatsApp Join our 'Shan Media News' WhatsApp group - Join Now ×