ಪುತ್ತೂರು; ಬಿಂದು ಫ್ಯಾಕ್ಟರಿಗೆ ಸೇರಿದ ಬೋರ್ ವೆಲ್ ಲಾರಿಗಳ ಮೇಲೆ ಕಲ್ಲು ತೂರಾಟ

 


ಪುತ್ತೂರು; ಬಿಂದು ಫ್ಯಾಕ್ಟರಿಗೆ ಸೇರಿದ ಬೋರ್ ವೆಲ್ ಲಾರಿಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿರುವ ಘಟನೆ ಪುರುಷರ ಕಟ್ಟೆ ಎಂಬಲ್ಲಿ ನಡೆದಿದೆ.ಈ ಬಗ್ಗೆ ಪುತ್ತೂರು ಠಾಣೆಯಲ್ಲಿ ಎರಡು ಕಡೆಗಳಿಂದ ದೂರು ದಾಖಲಾಗಿದೆ.

ಪುರುಷರ ಕಟ್ಟೆಯಲ್ಲಿರು ಸಾಫ್ಟ್ ಡ್ರಿಂಕ್ ಫ್ಯಾಕ್ಟರಿ ಬಿಂದು ಸಂಸ್ಥೆಯಲ್ಲಿ ಹಳೆಯ ಬೋರ್ ವೆಲ್ ಗಳನ್ನು ಫ್ಲಶ್ ಮಾಡುವ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಈ ಪರಿಸರದಲ್ಲಿ ಹೊಸದಾಗಿ ಬೋರ್ ವೆಲೆ ತೆಗೆಯುತ್ತಿದ್ದಾರೆ ಎಂದು ಆರೋಪಿಸಿ ಕೆಲವು ಕಿಡಿಗೇಡಿಗಳು ಬೋರ್ ವೆಲ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆ ಕುರಿತಂತೆ ಎರಡೂ ಕಡೆ ಗುಂಪುಗಳಿಂದ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×