ಮಡಿಕೇರಿ: ಬಾಲಕಿಯನ್ನು ಕೊಂದ ಹಂತಕ ಪ್ರಕಾಶ್‌ ರುಂಡದೊಂದಿಗೆ ಪರಾರಿ



ಮಡಿಕೇರಿ: 15 ವರ್ಷದ ಬಾಲಕಿಯನ್ನು ಕೊಂದು ಹಂತಕ ಆಕೆಯ ರುಂಡದೊಂದಿಗೆ ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಮುತ್ಲು ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ

ಹಂತಕನನ್ನು 32 ವರ್ಷದ ಪ್ರಕಾಶ್ ಎಂದು ಗುರುತಿಸಲಾಗಿದೆ. ಅಪ್ರಾಪ್ತ ಬಾಲಕಿಯನ್ನು ವಿವಾಹ ಮಾಡುವದಕ್ಕೆ ಪೋಷಕರು ಮುಂದಾಗಿದ್ದು, ಹಂತಕನ ಜೊತೆ ಎಂಗೇಜ್ಮೆಂಟ್ ಮಾಡುವ ವೇಳೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಮೇ.9 ರಂದು ತಡೆದಿದ್ದರು. ಅಪ್ರಾಪ್ತೆಯನ್ನು ಈಗಲೇ ಮದುವೆ ಮಾಡಬೇಡಿ ಎಂದು ಅಧಿಕಾರಿಗಳು ಬಾಲಕಿಯ ಪೋಷಕರಿಗೆ ಮನವರಿಕೆ ಮಾಡಿದ್ದರು ಎಂದು ತಿಳಿದು ಬಂದಿದೆ.

ಕಳೆದ ರಾತ್ರಿ ಬಾಲಕಿಯ ಮನಗೆ ನುಗ್ಗಿ ಆಕೆಯನ್ನು ಅಪಹರಿಸಿದ್ದಾನೆ. ಮಾರನೇ ದಿನ ಗ್ರಾಮದ ಪಕ್ಕದ ಅರಣ್ಯದ ಬಳಿ ಬಾಲಕಿಯ ರುಂಡವಿಲ್ಲದ ದೇಹ ಪತ್ತೆಯಾಗಿದೆ. ಆರೋಪಿ ರುಂಡದೊಂದಿಗೆ ಪರಾರಿಯಾಗಿದ್ದಾನೆ. ಪೊಲೀಸರು ಹಂತಕನಿಗಾಗಿ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×